ಕ್ಷುದ್ರ ಅಗ್ನಿಮಂಥ ಎನ್ನುವುದು ಲಾಮಿಯೇಸಿಯೆ ಕುಟುಂಬದಲ್ಲಿ ಹೂಬಿಡುವ ಸಸ್ಯಗಳ ಜಾತಿಯಾಗಿದೆ. ಕ್ಲೆರೊಡೆಂಡ್ರಮ್ ಫ್ಲೋಮಿಡಿಸ್( ) ಎನ್ನುವುದು ಇದರ ವೈಜ್ಞಾನಿಕ ಹೆಸರು. ಸಸ್ಯವನ್ನು ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತದೆ. ಇದು ಭಾರತ ಮತ್ತು ಶ್ರೀಲಂಕಾದಲ್ಲಿ ಬೆಳೆಯುವ ಸಾಮಾನ್ಯವಾದ ದೊಡ್ಡ ಪೊದೆಸಸ್ಯವಾಗಿದೆ. = ಸಾಮಾನ್ಯ ಹೆಸರು = ಸಂಸ್ಕೃತ ಹೆಸರು: ಅಗ್ನಿಮಂತ ಹಿಂದಿ ಹೆಸರು: ಉರ್ನಿ, ಅರ್ನಾ, ಅರ್ನಿ = ವಿವರಣೆ = ಈ ಮೂಲಿಕೆ ಲ್ಯಾಮಿಯೇಸಿಯೆ ಕುಟುಂಬಕ್ಕೆ ಸೇರಿದೆ. ಎಲೆಗಳು ಅಂಡಾಕಾರವಾಗಿರುತ್ತದೆ. ಹೂಗಳು ಸಣ್ಣದಾಗಿ ದುಂಡಗಿರುತ್ತವೆ. ಹೂವುಗಳು ಆಗಸ್ಟ್ ನಿಂದ ಫೆಬ್ರವರಿಯ ಸಮಯದಲ್ಲಿ ಅರಳುತ್ತವೆ. ಹೂವುಗಳು ಬಿಳಿ ಅಥವಾ ಗುಲಾಬಿ ಬಣ್ಣದ್ದಾಗಿರುತ್ತವೆ ಮತ್ತು ಅವು ಬಹಳ ಪರಿಮಳಯುಕ್ತವಾಗಿವೆ. = ಉಪಯೋಗ = ದಶಮೂಲ ಔಷಧಗಳಲ್ಲಿ ಇದನ್ನು ಬಳಸುತ್ತಾರೆ. ಎಲೆಗಳನ್ನು ಪುಡಿಮಾಡಿ ಬಾಹ್ಯ ಊತದ ಚಿಕಿತ್ಸೆಗೆ ಬಳಸುತ್ತಾರೆ. ಬೇರಿನ ಕಷಾಯವನ್ನು ಅಗ್ನಿಮಾಂದ್ಯ,ಅಜೀರ್ಣ ಮತ್ತು ವಾತವಿಕಾರಗಳಲ್ಲಿ ಬಳಸುತ್ತಾರೆ. = ಉಲ್ಲೇಖ =